ಏರ್ ಮಾರ್ಷಲ್ ರಾಜೇಶ್ ಕುಮಾರ್ ಅವರು ಭಾರತೀಯ ವಾಯುಪಡೆಯ ಮಾಜಿ ಅಧಿಕಾರಿಯಾಗಿದ್ದಾರೆ. ಅವರು ಕೊನೆಯದಾಗಿ ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್‌ನ ಕಮಾಂಡರ್-ಇನ್-ಚೀಫ್ ಆಗಿ ಸೇವೆ ಸಲ್ಲಿಸಿದರು. ಏರ್ ಮಾರ್ಷಲ್ ನವಕರಣಜಿತ್ ಸಿಂಗ್ ಧಿಲ್ಲಾನ್ ಅವರ ನಿವೃತ್ತಿಯ ನಂತರ ೨೦೨೧ ರ ಜನವರಿ ೩೧ ರಂದು ಅವರು ಅಧಿಕಾರ ವಹಿಸಿಕೊಂಡರು. ಈ ಹಿಂದೆ ಅವರು ಸೆಂಟ್ರಲ್ ಏರ್ ಕಮಾಂಡ್ ಎಒಸಿ-ಇನ್-ಸಿ ಮತ್ತು ಈಸ್ಟರ್ನ್ ಏರ್ ಕಮಾಂಡ್ ನಲ್ಲಿ ಎಸ್ಎಎಸ್ಒ ಆಗಿ ಸೇವೆ ಸಲ್ಲಿಸಿದ್ದರು. ಅವರು ೩೧ ಆಗಸ್ಟ್ ೨೦೨೧ ರಂದು ನಿವೃತ್ತರಾದರು. == ಆರಂಭಿಕ ಜೀವನ ಮತ್ತು ಶಿಕ್ಷಣ == ಕುಮಾರ್ ಅವರು ಅಜಮೇರ್‌ನ ಮಾಯೊ ಕಾಲೇಜು ಮತ್ತು ರಾ‌ಷ್ಟ್ರೀಯ ರಕ್ಷಣಾ ಅಕಾಡೆಮಿ, ಖಡಕವಸ್ಲ- ಇದರ ಹಳೆವಿದ್ಯಾರ್ಥಿ. ವಾಯು ಕಮಾಂಡ್ ಮತ್ತು ಸ್ಥಾಫ್ ಕಾಲೇಜು, ಮೋಂಟ್ಗೋಮೇರಿ, ಅಲಬಾಮ -ಇಲ್ಲಿನ ಪದವೀಧರರು. ಸಿಕಂದರಾಬಾದ್‌ನಲ್ಲಿರುವ ರಕ್ಷಣಾ ನಿರ್ವಹಣಾ ಕಾಲೇಜಿನಿಂದ ಉನ್ನತ ರಕ್ಷಣಾ ನಿರ್ವಹಣಾ ತರಬೇತಿಯನ್ನೂ ಪಡೆದಿರುವರು. == ವೃತ್ತಿಜೀವನ == ಕುಮಾರ್ ಅವರನ್ನು ೧೯೮೨ ರ ಜೂನ್ ೪ ರಂದು ಭಾರತೀಯ ವಾಯುಪಡೆಯ ಫೈಟರ್ ಸ್ಟ್ರೀಮ್‌ಗೆ ನಿಯೋಜಿಸಲಾಯಿತು. ಅವರು ಫೈಟರ್ ಏರ್ಕ್ರಾಫ್ಟ್ ಸ್ಕ್ವಾಡ್ರನ್ ಮತ್ತು ಫ್ರಂಟ್-ಲೈನ್ ವಾಯುನೆಲೆಯನ್ನು ಮುನ್ನಡೆಸಿದ್ದಾರೆ. ಅವರು ಎ ವರ್ಗದ ಫ್ಲೈಯಿಂಗ್ ಬೋಧಕ, ಇನ್ಸ್ಟ್ರುಮೆಂಟ್ ರೇಟಿಂಗ್ ಬೋಧಕ ಮತ್ತು ಏರ್ ಕ್ರೂ ಮೇಲ್ವಿಚಾರಕರಾಗಿದ್ದಾರೆ. ಅವರು ಇಸ್ರೇಲ್‌ನ ಎಡಬ್ಲ್ಯೂಎಸಿಎಸ್ ಯೋಜನೆಯ ಮೇಲ್ವಿಚಾರಣಾ ತಂಡದ ನಾಯಕರಾಗಿ, ಬೆಂಗಳೂರಿನ ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿ ಭಾರತೀಯ ವಾಯುಪಡೆಯ ಯೋಜನಾ ನಿರ್ವಹಣಾ ತಂಡದ ನಿರ್ದೇಶಕರಾಗಿ ಮತ್ತು ಶಿಲ್ಲಾಂಗ್‌ನ ಪೂರ್ವ ವಾಯು ಕಮಾಂಡ್‌ನ ಹಿರಿಯ ವಾಯು ಸಿಬ್ಬಂದಿ ಅಧಿಕಾರಿಯಾಗಿ ನೇಮಕರಾಗಿದ್ದಾರೆ. ತಮ್ಮ ೩೬ ವರ್ಷಗಳ ವೃತ್ತಿಜೀವನದಲ್ಲಿ, ಕುಮಾರ್ ಅವರಿಗೆ ೨೦೨೧ ರಲ್ಲಿ ಪರಮ್ ವಿಶಿಷ್ಟ ಸೇವಾ ಪದಕ, ೨೦೧೯ ರಲ್ಲಿ ಅತಿ ವಿಶಿಷ್ಟ ಸೇವಾ ಪದಕ ಮತ್ತು ಆಪರೇಷನ್ ಪರಾಕ್ರಮ ಶೌರ್ಯಕ್ಕಾಗಿ ವಾಯು ಸೇನಾ ಪದಕ ನೀಡಲಾಗಿದೆ. ರಾಜೇಶ್ ಕುಮಾರ್ ಅವರು ಜಯಾ ಕುಮಾರ್ ಅವರನ್ನು ವಿವಾಹವಾಗಿದ್ದಾರೆ. ಅವರಿಗೆ ಇಬ್ಬರು ಪುತ್ರರಿದ್ದಾರೆ . == ಉಲ್ಲೇಖಗಳು ==